ನಡಹಳ್ಳಿ ಶ್ರೀಪಾದ ರಾವ್

ಸಂಸ್ಥಾಪಕ | ನಿರ್ಮಾಪಕ | ವಿತರಕ

ಭಾರತದ ಮಹಿಳಾ ಜನಸಂಖ್ಯೆಯ ಶೇಕಡಾ ೧೦ ರಷ್ಟಿರುವ 'ವಿಧವೆ' ಯರಲ್ಲಿ ಹೆಚ್ಚಿನವರ ಪರಿಸ್ಥಿತಿ ಇನ್ನೂ 'ಜೀವಂತ ಸತಿ' ಸ್ಥಾನದಲ್ಲಿಯೇ ಇದೆ. ಬಾಲ ವಿಧವೆಯಾಗಿ ನರಕಸದೃಶ ಜೀವನ ಸವೆಸಿದ ದೊಡ್ಡಮ್ಮನನ್ನು ಕಣ್ಣಾರೆ ಕಂಡ ನಡಹಳ್ಳಿ ಶ್ರೀಪಾದ ರಾವ್, ಸ್ವಯಂ ಪರಿವರ್ತನೆಯಾಗಿ, ವಿಧವಾ ಕಥಾ ವಸ್ತುವಿನ 'ಹೊಸ ಬದುಕು' ಕಾದಂಬರಿ ರಚಿಸಿ ಮಗುವಿರುವ ಒಬ್ಬ ವಿಧವೆಯನ್ನು ವಿವಾಹವಾಗಿ, ವಿಧವಾ ಕ್ಷೇಮಾಭಿವೃದ್ಧಿ ಸಂಸ್ಥೆ 'ಪರಿವರ್ತನ' ಸ್ಥಾಪಿಸಿದ್ದಾರೆ.

ಜಗತ್ತಿನ ಯಾವುದೇ ಸಮಸ್ಯೆಗಳ ಬಗ್ಗೆ ಜನಜಾಗೃತಿ ಮೂಡಿಸಿ, ಸಮಾಜ ಪರಿವರ್ತನೆ ಮಾಡಬಲ್ಲ ಪ್ರಬಲ ಮಾಧ್ಯಮ 'ಚಲನಚಿತ್ರ'. ಚಲನಚಿತ್ರ ಇಡೀ ಪ್ರಪಂಚವೇ ಅರ್ಥ ಮಾಡಿಕೊಳ್ಳಬಲ್ಲ ಏಕ್ಯಕ ಭಾಷೆ. ಆ ನಂಬಿಕೆಯಿಂದ ನಡಹಳ್ಳಿ ಶ್ರೀಪಾದ ರಾವ್ ವಿಧವಾ ವಿವಾಹ ಕಥಾವಸ್ತುವಿನ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ 'ಹೂಮಳೆ' ಚಲನಚಿತ್ರ ನಿರ್ಮಿಸಿದ್ದರು. ಪ್ರಸ್ತುತ ಅಂತರರಾಷ್ಟ್ರೀಯ ಬಹು ಸೂಕ್ಷ್ಮ ಸಾಮಾಜಿಕ ಸಮಸ್ಯೆ ಕುರಿತಾದ ಮನರಂಜನೀಯ, ಸದಭಿರುಚಿಯ, ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತರಾದ ಸಂಚಾರಿ ವಿಜಯ್ ಮತ್ತು ಶೃತಿ ಹರಿಹರನ್ ನಟನೆಯ "ಅಂತ್ಯವಲ್ಲ ಆರಂಭ" ಚಲನಚಿತ್ರವನ್ನು "ಸಮೂಹ ನಿಧಿ ಬೆಂಬಲ"ದಿಂದ ನಿರ್ಮಿಸಿ ಬಿಡುಗಡೆಗೆ ಸಿದ್ಧಪಡಿಸಿದ್ದಾರೆ.

ಹೀಗೆ ಇನ್ನೂ ಅನೇಕ ಸಾಮಾಜಿಕ ಸಮಸ್ಯೆಗಳ ಕುರಿತು ಈ ಕೆಳಗಿನ ಶೀರ್ಷಿಕೆಯಡಿ ಹಲವು ಸಿನಿಮಾ ನಿರ್ಮಿಸುವ ಯೋಜನೆ ಹಮ್ಮಿ ಕೊಂಡಿದ್ದಾರೆ ನಡಹಳ್ಳಿ ಶ್ರೀಪಾದ ರಾವ್.