Referral incentivesಕನ್ನಡ ಸದಭಿರುಚಿ ಚಲನಚಿತ್ರ ಪ್ರೋತ್ಸಾಹ ತಂಡ ಎಂಬುದು ನಡಹಳ್ಳಿ ಶ್ರೀಪಾದ ರಾವ್ ಮಾಲೀಕತ್ವದ ಒಂದು ವಿಭಿನ್ನ ಬಗೆಯ ಚಲನಚಿತ್ರ ಹಂಚಿಕಾ ಖಾಸಗಿ ಸಂಸ್ಥೆ. ಸಾಮಾಜಿಕ ಕಲ್ಯಾಣ ಕಾರ್ಯದಲ್ಲಿ ಮತ್ತು ಸಿನಿಮಾ ಮಾಧ್ಯಮದಲ್ಲಿ ಆಸಕ್ತಿ ಇರುವ ಯಾರು ಬೇಕಾದರೂ ಈ ಸಂಸ್ಥೆಯಡಿ ಕಿರು ಹಂಚಿಕೆದಾರರಾಗಬಹುದು. ಇದು ಒಂದು ಬಗೆಯ ಸ್ವ ಸಹಾಯ ಗುಂಪುಗಳ ರೀತಿ. ಆದರೆ ಸ್ವ ಸಹಾಯದ ಬದಲು ಪರಸ್ಪರ ಸಹಾಯ ಗುಂಪುಗಳು ಎಂಬ ಹೊಸ ಉದ್ದೇಶ ಹೊಂದಿದೆ. ಇದು ಸಾಲ ಕೊಡುವ ಅಥವಾ ಪಡೆಯುವ ಗುಂಪು ಅಲ್ಲ, ಇದು ದುಡಿಯುವ ಗುಂಪು. ನಡಹಳ್ಳಿ ಶ್ರೀಪಾದ ರಾವ್ ಹಂಚಿಕೆ ಮಾಡುವ ಚಲನಚಿತ್ರಗಳ ಕಿರುಹಂಚಿಕೆ ಮಾಡುವುದೇ ಈ ಗುಂಪುಗಳ ಮೂಲ ಉದ್ದೇಶ. ಇದರಿಂದ ಗೌರವ ಧನ ಪಡೆಯುವುದರೊಂದಿಗೆ ಏಕ ಕಾಲದಲ್ಲಿ ಹಲವು ಸಾಮಾಜಿಕ ಸದುದ್ದೇಶಕ್ಕೆ ನೆರವಾಗುವ ಭಾಗ್ಯ ದೊರೆಯುತ್ತದೆ.

Note: NGOs, Cultural Associations & Organisations, Clubs and other institutions can contact us for bulk charity tickets on fund sharing basis for social causes and programs.